Congress did legislative members meeting today in the leadership of Siddaramaiah. Congress many MLAs raise complaint against CM Kumaraswamy and JDS. They accused that congress MLAs not getting value in government.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಇಂದು ಶಾಸಕಾಂಗ ಸಭೆ ನಡೆಸಿದ್ದು, ಸಭೆಯಲ್ಲಿ ಸಿಎಂ ಮೇಲೆ ದೂರುಗಳ ಸುಳಿಮಳೆಯೇ ಸುರಿದಿದೆ. ಸಭೆಯಲ್ಲಿ ಬಹುತೇಕ ಶಾಸಕರು, ಕಾಂಗ್ರೆಸ್ ಶಾಸಕರಿಗೆ ಸರ್ಕಾರದಲ್ಲಿ ಸೂಕ್ತ 'ಗೌರವ' ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಜೆಡಿಎಸ್ ಶಾಸಕರ, ಮುಖಂಡರ ಕೆಲಸಗಳು ಚಕಚಕನೆ ಆಗುತ್ತವೆ ಆದರೆ ಕಾಂಗ್ರೆಸ್ ಶಾಸಕರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಹಲವರು ಆರೋಪಿಸಿದರು.